ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವುದರಲ್ಲಿ ಪೋಷಕರ ಮಾತ್ರ ಪ್ರಮುಖವಾದದು.
ಉತ್ತಮ ಮಾರ್ಗದರ್ಶನದಲ್ಲಿ ನಡೆದ ಮಕ್ಕಳು ದಾರಿ ತಪ್ಪುವ ಸಾಧ್ಯತೆ ತುಂಬಾ ಕಡಿಮೆ. ಅದರಲ್ಲೂ ಮಕ್ಕಳಿಗೆ
ಕೆಲವೊಂದು ನೀತಿ ನಿಯಮಗಳನ್ನು ಪೋಷಕರು ಹೇಳಿಕೊಡಬೇಕು. ಚಿಕ್ಕದಿರುವಾಗ ಮಕ್ಕಳು ಮಡುವ ತುಂಟಾಟಗಳನ್ನು
ತಿದ್ದದೇ ಹೋದರೆ ಅಂತಹ ಮಕ್ಕಳು ದೊಡ್ಡದಾದ ಮೇಲೆ ಪೋಷಕರ ಮಾತು ಕೇಳುವುದಿಲ್ಲ. ದೊಡ್ಡದಾದ ಮೇಲೆ ತಾವು
ಹೇಳಿದ್ದೇ ಸರಿ ನಡೆದಿದ್ದೇ ರೀತಿ ಎಂಬಂತೆ ವರ್ತಿಸುವಾಗ ಚಿಂತಿಸಿ ಫಲವಿಲ್ಲ.
ಕೆಲವು ಪೋಷಕರು ತಮಗೇ ಒಂದೇ ಮಗು ಎಂದು ಆ ಮಗುವನ್ನು ವಿಪರೀತ ಮುದ್ದು ಮಾಡಿ ಸಾಕುತ್ತಾರೆ. ಮಗು ಏನೇ ಗಲಾಟೆ ಮಾಡಿದರೂ, ಹಠ ಮಾಡಿದರೂ ಎನೂ ಹೇಳುವುದಿಲ್ಲ. ಆದರೆ ಈ ರೀತಿ ಬೆಳೆಸಿದರೆ ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ.
ಕೆಲವು ಪೋಷಕರು ತಮಗೇ ಒಂದೇ ಮಗು ಎಂದು ಆ ಮಗುವನ್ನು ವಿಪರೀತ ಮುದ್ದು ಮಾಡಿ ಸಾಕುತ್ತಾರೆ. ಮಗು ಏನೇ ಗಲಾಟೆ ಮಾಡಿದರೂ, ಹಠ ಮಾಡಿದರೂ ಎನೂ ಹೇಳುವುದಿಲ್ಲ. ಆದರೆ ಈ ರೀತಿ ಬೆಳೆಸಿದರೆ ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ.
ಎಲ್ಲಾ ಪೋಷಕರಿಗೆ ತಮ್ಮ ಮಕ್ಕಳು ಆದರ್ಶವಾಗಿ ಬೆಳೆಯಬೇಕೆಂಬ
ಆಸೆ ಇರುತ್ತದೆ. ಆ ರೀತಿ ಬೆಳೆಯಲು ಮಕ್ಕಳಿಗೆ ಈ ಕೆಳಗಿನ ಜೀವನ ಪಾಠಗಳನ್ನು ಕಡ್ಡಾಯವಾಗಿ ಹೇಳಿಕೊಡಬೇಕು.
1.ಹಿರಿಯರನ್ನು ಗೌರವಿಸುವುದು: ಮಕ್ಕಳಿಗೆ ಗುರು ಹಿರಿಯರಿಗೆ ಗೌರವ ಕೊಟ್ಟು ನಡೆದುಕೊಳ್ಳುವುದನ್ನು ಕಲಿಸಬೇಕು. ಮಕ್ಕಳು ಈ ರೀತಿ ನಡೆದುಕೊಂಡರೆ ಜನರು ಪೋಷಕರನ್ನು ಹೊಗಳುತ್ತಾರೆ. ಇಲ್ಲದಿದ್ದರೆ ಮಕ್ಕಳು ಮಾಡುವ ತಪ್ಪುಗಳಿಗೆ ಈ ಸಮಾಜ ಪೋಷಕರನ್ನೇ ಹೊಣೆ ಮಾಡುತ್ತದೆ.
2. ಪ್ರಾಮಾಣಿಕತೆ: ಪ್ರಾಮಾಣಿಕತೆಯಿಂದ ನಡೆದುಕೊಳ್ಳುವುದನ್ನು ತಿಳಿಸಿ. ನೀತಿ ತೆಗಳನ್ನು ಹೇಳಿ. ಈ ಪಾಠಗಳು ಮುಂದೆ ಆ ಮಕ್ಕಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುತ್ತದೆ.
3.ಸೋಲನ್ನು ಎದುರಿಸುವುದನ್ನು ಕಲಿಸಿ: ಇಲ್ಲಿ ತುಂಬಾ ಪೋಷಕರು ತಪ್ಪು ಮಾಡುತ್ತಾರೆ. ಮಕ್ಕಳ ಜಯವನ್ನು ಕಂಡು ಸಂತೋಷ ಪಟ್ಟು ಹುರಿದುಂಬಿಸಿ, ಸೋಲನ್ನು ಅನುಭವಿಸಿದಾಗ ಇತರ ಮಕ್ಕಳ ಜೊತೆ ಹೋಲಿಕೆ ಮಾಡಿ ಬೈಯ್ಯುವುದು, ಹೀಯಾಳಿಸುವುದು ಮಾಡುತ್ತಾರೆ. ಆದರೆ ಒಂದು ಪೋಷಕರು ಒಂದು ವಿಷಯವನ್ನು ತಿಳಿದುಕೊಳ್ಳಬೇಕು ಬೈಯ್ಯದ್ದರೆ, ಹೀಯಾಳಿಸದರೆ ಮಕ್ಕಳು ಮತ್ತೆ ಜಯಗಳಿಸಿ ಬರುತ್ತಾರೆ ಅನ್ನುವುದು ತಪ್ಪು ಕಲ್ಪನೆ. ಯಾವುದಾದರೂ ವಿಷಯದಲ್ಲಿ ಸೋತಾಗ ಮಾನಸಿಕ ಧೈರ್ಯ ನೀಡಿ, ಸೋಲೇ ಗೆಲುವಿಗೆ ಮೆಟ್ಟಲು ಎಂದು ಸಮಧಾನಿಸಿ. ಈ ರೀತಿ ಮಾಡಿದರೆ ಮಕ್ಕಳು ಬದುಕಿನಲ್ಲ ಬರುವ ಕಷ್ಟಗಳನ್ನು, ಸೋಲುಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳುತ್ತಾರೆ.
4. ಕರುಣೆ: ಮಕ್ಕಳಿಗೆ ಇತರರು ಕಷ್ಟದಲ್ಲಿರುವಾಗ ಸಹಾಯ ಮಾಡಬೇಕೆಂಬ ಪಾಠ ಕಲಿಸಿ. ಸಹಾಯ ಮಾಡಲು ಆಗದಿದ್ದರೂ ಕಷ್ಟದಲ್ಲಿರುವವರನ್ನು ಮತ್ತಷ್ಟು ನೋಯಿಸುವ ಕೆಲಸ ಮಾಡಬಾರದು ಎಂಬ ಪಾಠ ಕಲಿಸಿಕೊಡಬೇಕು.
5. ಹೊಂದಾಣಿಕೆ: ಮಕ್ಕಳಿಗೆ ಇತರ ಮಕ್ಕಳ ಜೊತೆ ಹೊಂದಾಣಿಕೆಯಿಂದ ಇರುವುದನ್ನು ಕಲಿಸಿದರೆ, ಮಕ್ಕಳು ಬೆಳೆದಾಗ ಎಂತಹ ಪರಿಸ್ಥಿತಿಗೂ ಹೊಂದಿಕೊಂಡು ಹೋಗುವುದನ್ನು ಕಲಿಯುತ್ತಾರೆ.
6. ಶ್ರಮ: ಮಕ್ಕಳ ಎಲ್ಲಾ ಕೆಲಸವನ್ನು ಪೋಷಕರೇ ಮಾಡದೇ ಅವರ ಕೆಲಸವನ್ನು ಅವರೇ ಮಾಡುವುದನ್ನು ಕಲಿಸಬೇಕು. ಕಷ್ಟಪಟ್ಟು ಓದಿ ಅಂತ ಪ್ರೋತ್ಸಾಹಿಸಬೇಕು. ಸೋಮರಿಗಳಾಗಿದ್ದರೆ ನೋಡಿ ಸುಮ್ಮನೆ ಇರದೆ ತಿಳಿ ಹೇಳಬೇಕು.
7. ಸಾವರ್ಜನಿಕ ಸ್ಥಳಗಳಲ್ಲಿ ವರ್ತನೆ: ಇದನ್ನು ಮುಖ್ಯವಾಗಿ ಕಲಿಸಿರಬೇಕು. ಇಲ್ಲದಿದ್ದರೆ ಪೋಷಕರು ಅವಮಾನ ಎದುರಿಸಬೇಕಾಗುತ್ತದೆ. ಏಕೆಂದರೆ ಮಕ್ಕಳು ಸಮಾಜದಲ್ಲಿ ಹೇಗೆ ವರ್ತಿಸುತ್ತಾರೆ ಅನ್ನುವುದರ ಆಧಾರದ ಮೇಲೆ ದೊಡ್ಡವರಾದ ಮೇಲೆ ಸ್ಥಾನಮಾನ ದೊರೆಯುತ್ತದೆ

ಮಕ್ಕಳು ವಯಸ್ಸಿಗೆ ತಕ್ಕ ಬೆಳವಣಿಗೆಯನ್ನು ಹೊಂದಬೇಕು. ಇಲ್ಲದಿದ್ದರೆ
ಬೆಳೆದರೂ ಕುಬ್ಜರಂತೆ ಕಾಣುವುದು. ಮಕ್ಕಳು ಆರೋಗ್ಯವಂತರಾಗಿ ಬೆಳೆಯಲು ಅಗತ್ಯವಾದ ಪೋಷಕಾಂಶಗಳನ್ನು
ನೀಡಬೇಕು. ಸಹಜ ಬೆಳವಣಿಗೆ ಮತ್ತು ಅಭಿವೃದ್ಧಿಗೆ ವ್ಯತಿರಿಕ್ತವಾಗಿದ್ದರೆ ಅರೋಗ್ಯಕೇಂದ್ರದ ಸಹಾಯವನ್ನು
ಪಡೆಯಬೇಕು.
ಮಕ್ಕಳ ಬೆಳವಣಿಗೆಯು ವಯೋಮಾನಕ್ಕೆ ಅನುಗುಣವಾಗಿ
ವಿಭಿನ್ನವಾಗಿರುತ್ತದೆ. ಉಷ್ಣ ಪ್ರದೇಶದಲ್ಲಿ ಮಕ್ಕಳು ಬೇಗನೆ ಬೆಳವಣಿಗೆಯನ್ನು ಹೊಂದುತ್ತಾರೆ. ಮಕ್ಕಳ
ಬೆಳವಣಿಗೆಯು ಹಲವಾರು ವಿಷಯಗಳಿಂದ ಪ್ರಭಾವಿತವಾಗಿವೆ. ಸಾಮಾನ್ಯವಾಗಿ ಆರೋಗ್ಯವಂತ ಮಕ್ಕಳಲ್ಲಿ ಬೆಳವಣಿಗೆಯು ಜೀವನದ ಮೊದಲ ವರ್ಷದಲ್ಲಿಯೇ
ಶೀಘ್ರವಾಗಿ ಆಗುತ್ತದೆ
ಬೆಳವಣಿಗೆಯ ಕ್ರಮ:
ಬಹುತೇಕ ಎಲ್ಲ ಮಕ್ಕಳು ಹುಟ್ಟಿದ 2-3 ದಿನಗಳಲ್ಲಿ
ತೂಕ ಕಳೆದುಕೊಳ್ಳುತ್ತವೆ. 7 ರಿಂದ 10 ದಿನಗಳಲ್ಲಿ ಪುನಃ ತೂಕ ಗಳಿಸುತ್ತವೆ. ಅವುಮೊದಲ ಮೂರು ತಿಂಗಳ
ತನಕ ಗಳಿಸುವ ತೂಕವು ದಿನಕ್ಕೆ 25-30ಗ್ರಾಂ ಆಗಿರುತ್ತದೆ. ಸಾಮಾನ್ಯವಾಗಿ ಮಗುವಿನ ತೂಕ 3 ತಿಂಗಳಲ್ಲಿ
ಹುಟ್ಟಿದಾಗ ಇದ್ದ ತೂಕಕ್ಕಿತ ಎರಡು ಪಟ್ಟು ಮತ್ತು ಒಂದು ವರ್ಷದಲ್ಲಿ ಮೂರು ಪಟ್ಟು ಹೆಚ್ಚಾಗುವುದು.
ಕೆಲವೊಂದು ಮಕ್ಕಳು ಹುಟ್ಟಿದಾಗಲೆ ಕಡಿಮೆ ತೂಕವಿದ್ದರೂ ಕೂಡ ಅಂತಹ ಮಕ್ಕಳಲ್ಲಿ ತೂಕ ಬೇಗನೆ ಎರಡುಪಟ್ಟಾಗುವುದು.
ಒಂದು ವರ್ಷದಲ್ಲಿ ನಾಲ್ಕು ಪಟ್ಟಾಗುವುದು. ಒಂದು ವರ್ಷದ ನಂತರ ಬೆಳವಣಿಗೆಯ ವೇಗ ಕಡಿಮೆಯಾಗುವುದು.ಮಕ್ಕಳು ಹುಟ್ಟಿದಾಗ ತುಂಬಾ
ಕಡಿಮೆ ತೂಕವಿದ್ದರೂ ನಂತರ ಪೌಷ್ಠಿಕ ಆಹಾರಗಳಿಂದ ತೂಕ ಹೆಚ್ಚಾಗುವುದು. ಆದರೆ ಮತ್ತೆ ಕೆಲವು ಮಕ್ಕಳಲ್ಲಿ
ಈ ರೀತಿಯ ಬೆಳವಣಿಗೆ ಕಂಡುಬರುವುದಿಲ್ಲ. ಆ ರೀತಿಯಾದರೆ ಮಕ್ಕಳ ತಜ್ಞರನ್ನು ಕಂಡು ಸಲಹೆಗಳನ್ನು ಪಡೆದುಕೊಳ್ಳಬೇಕು.
ಮಕ್ಕಳ ತೂಕದ ಗ್ರಾಫ್ ಪ್ರಕಾರ ಅನೇಕ ಮಕ್ಕಳಲ್ಲಿ
ಮೊದಲ 5-6 ತಿಂಗಳಲ್ಲಿ ಬೆಳವಣಿಗೆ ಸರಿಯಾದ ರೀತಿಯಲ್ಲಿಯಾಗುವುದು. ತೂಕ ಆ ಅವಧಿಯಲ್ಲಿ ದ್ವಿಗುಣವಾಗುವುದು.
ನಂತರ ಬೆಳವಣಿಗೆ ಕುಂಠಿತವಾಗುತ್ತದೆ. ಇದಕ್ಕೆ ಕಾರಣ ಮಗುವಿಗೆ ಎದೆ ಹಾಲು ಸಾಕಾಗುವುದಿಲ್ಲ. ಅದರ ಜತೆ
ಹೆಚ್ಚುವರಿ ಆಹಾರವನ್ನು ಈಗಾಗಲೇ ಚರ್ಚಿಸಿದಂತೆ ನೀಡಬೇಕಾಗುವುದು.
ಮಗುವಿನ ತೂಕವು ಅದರ ಎತ್ತರವನ್ನು ಅವಲಂಬಿಸಿದೆ. ಮಗುವಿನ ತೂಕವು ಸಹಜವಾಗಿ ಇದೆಯೋ ಇಲ್ಲವೇ ಎಂಬುದನ್ನು ಅರಿಯುವುದು ಅತಿ ಅಗತ್ಯ. ಅದರ ಎತ್ತರದ ಪ್ರಕಾರ ಮಗುವು ಹೆಚ್ಚು ತೂಕದ್ದಾಗಿರಬಹುದು ಇಲ್ಲವೇ ಕಡಿಮೆ ತೂಕದ್ದಾಗಿರಬಹುದು. ಅತಿ ಕಡಿಮೆ ತೂಕ ಹೊಂದಿದ್ದರೆ ಅದು ಪೌಷ್ಟಿಕ ಆಹಾರಗನ್ನು ಕೊಡಬೇಕು.

ಎತ್ತರವು ಮಗುವಿನ ಬೆಳವಣಿಗೆಯನ್ನು ಅರಿಯುವ ಒಂದು
ಅಂಶವಾಗಿದೆ. ನವಜಾತ ಶಿಶುವಿನ ಎತ್ತರವು 20 ಇಂಚು ಇರುತ್ತದೆ. ನಂತರ ಮೊದಲ ವರ್ಷದಲ್ಲಿ ಅದಕ್ಕಿಂತ
25ಸೆ.ಮೀ, ಎರಡನೆ ವರ್ಷದಲ್ಲಿ 12 ಸೆ.ಮೀ ಬೆಳೆಯುವುದು.3ನೇ, 4ನೇ,ಮತ್ತು 5ನೇ ವರ್ಷದಲ್ಲಿ ಕ್ರಮವಾಗಿ
9 ಸೆಂ.ಮಿ, 7ಸೆಂ.ಮೀ ಮತ್ತು 6 ಸೆಂ.ಮೀ.ಬೆಳೆಯಬೇಕು. ಎತ್ತರವು ವಯಸ್ಸಿಗೆ ಅನುಗುಣವಾಗಿಲ್ಲದಿದ್ದರೆ
ಅದನ್ನು ಕುಂಠಿತ ಬೆಳವಣಿಗೆ ಅಥವಾ ಕುಬ್ಜ ಬೆಳವಣಿಗೆ ಎಂದು ಅರ್ಥ.
ಮಗುವಿನ ಅಭಿವೃದ್ಧಿಯು ಬೌದ್ಧಿಕ, ಭಾವನಾತ್ಮಕ,ಮತ್ತು
ಸಾಮಾಜಿಕ ಕೌಶಲ್ಯಗಳು ಮತ್ತು ಕಾರ್ಯಗಳಿಗೆ ಸಂಬಂಧಿಸಿದ ಅಭಿವೃದ್ಧಿಯನ್ನು ಸೂಚಿಸುತ್ತದೆ. ಅದು ಮಾನಸಿಕ,
ವರ್ತನೆಯ ಆಭಿವೃದ್ಧಿಯನ್ನು ಸೂಚಿಸುವುದು. ಅದ್ದರಿಂದ ಮಗುವಿನ ಬೆಳವಣಿಗೆಯ ಗಮನಿಸಬೇಕು. ತಾಯಂದಿರು
ಮತ್ತು ಕುಟುಂಬದ ಸದಸ್ಯರು ಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ಧಿಯ ಬಗ್ಗೆ ತಿಳೀದಿರುವುದು ಒಳ್ಳೆಯದು.
ವಂಶಪಾರಂಪರ್ಯ, ಪೌಷ್ಟಿಕತೆ, ಬಾಹ್ಯ ಪರಿಸರ, ಆರೋಗ್ಯ
ಇವೆಲ್ಲಾ ಮಕ್ಕಳ ಆರೋಗ್ಯದ ಮೇಲೆ ಪ್ರಭಾವ ಬೀಳುತ್ತದೆ. ಆದ್ದರಿಂದ ಮಗುವಿನ ಬೆಳವಣಿಗೆ ಸರಿಯಾಗಿ ಇರದಿದ್ದರೆ
ಕೂಡಲೇ ವೈದ್ಯರನ್ನು ಕಂಡು ಅದಕ್ಕೆ ಕಾರಣವನ್ನು ಕಂಡು ಪರಿಹಾರವನ್ನು ಕಂಡುಕೊಳ್ಳಬೇ
ಮಕ್ಕಳಿಗೆ ಈ ಮಾತುಗಳನ್ನು ತಪ್ಪಿಯೂ ಹೇಳಬೇಡಿ
ಪೋಷಕರು ಮಕ್ಕಳಲ್ಲಿ ಮಾತನಾಡುವಾಗ ಆಲೋಚಿಸಿ ಮಾತನಾಡಬೇಕು.
ಮಕ್ಕಳ ಮನಸ್ಸು ಸೂಕ್ಷ್ಮವಾಗಿದ್ದು , ನಿಮ್ಮ ಮಾತುಗಳಗಳು ತುಂಬಾ ಹರಿತವಾಗಿದ್ದರೆ ಆ ಸೂಕ್ಷ್ಮ ಮನಸ್ಸಿಗೆ
ತುಂಬಾ ನೋವಾಗುತ್ತದೆ. ಮಕ್ಕಳು ಮಾಡುವ ತಪ್ಪುಗಳನ್ನು ತಾಳ್ಮೆಯಿಂದ ತಿಳಿ ಹೇಳಬೇಕು, ಬೈಯ್ದು ಹೇಳುವುದಕ್ಕಿಂತ,
ಪ್ರೀತಿಯಿಂದ ಹೇಳಿದರೆ ಮಕ್ಕಳು ತಿದ್ದಿಕೊಳ್ಳುವುದು ಜಾಸ್ತಿ.
ಮಕ್ಕಳ ಮತ್ತು ನಿಮ್ಮ ಸಂಬಂಧ ಸುಂದರವಾಗಿರಬೇಕೆಂದರೆ
ಮಕ್ಕಳ ಜೊತೆ ಹೇಗೆ ಮಾತನಾಡಬೇಕು, ಹೇಗೆ ವರ್ತಿಸಬೇಕು ಎಂದು ತಿಳಿದಿರಬೇಕು. ನಿಮಗೆ ಮಕ್ಕಳನ್ನು ಕಂಡರೆ
ಆಗುವುದಿಲ್ಲ ಎಂಬ ಭಾವನೆ ಮಕ್ಕಳಲ್ಲಿ ಮೊಳಕೆಯೊಡೆಯಲು ಬಿಡಬಾರದು. ಸುಮ್ಮನೆ ಯಾವಾಗಲು ಬೈಯುವುದು,
ಹೊಡೆಯುವುದು ಮಾಡುತ್ತಿದ್ದರೆ ಇವರು ಯಾವಾಗಲೂ ಹೀಗೆನೆ ನನ್ನ ಕಂಡರೆ ಆಗುವುದಿಲ್ಲ ಎಂಬ ತಪ್ಪು ಕಲ್ಪನೆಯನ್ನು
ಬೆಳೆಸಿಕೊಂಡು ಬಿಡುತ್ತಾರೆ. ಅಲ್ಲದೆ ಮುಂದೆ ಮಕ್ಕಳು ತಪ್ಪು ಮಾಡಿದಾಗ ತಿಳಿ ಹೇಳಲು ಪ್ರಯತ್ನಿಸಿದರೂ
ಕೇರ್ ಮಾಡುವುದಿಲ್ಲ. ಅದರಲ್ಲೂ ಮಕ್ಕಳೊಂದಿಗೆ ಈ ಕೆಳಗಿನಂತೆ ಯಾವತ್ತೂ ಹೇಳಬೇಡಿ.
1. ನನಗೆ ನಿಮ್ಮ ಮಾತು ಕೇಳಲು ಪುರುಸೊತ್ತು
ಇಲ್ಲ: ನಿಮಗೆ ತುಂಬಾ ಕೆಲಸದ
ಒತ್ತಡವಿರುತ್ತದೆ ನಿಜ. ಆದರೆ ನಿಮ್ಮ ಮಕ್ಕಳಿಗೆ ಅದು ಗೊತ್ತಿರುವುದಿಲ್ಲ. ಅವುಗಳು ಶಾಲೆಯಲ್ಲಿ ನಡೆದ
ಪ್ರತಿಯೊಂದು ವಿಷಯವನ್ನು ನಿಮಗೆ ಹೇಳಲು ಇಷ್ಟಪಡುತ್ತಾರೆ. ಆಗ ನನಗೆ ಪುರುಸೊತ್ತು ಇಲ್ಲ, ನೀ ಸುಮ್ಮನೆ
ಹೋಗು ಅಂತ ಮಾತ್ರ ಹೇಳಬೇಡಿ, ಆ ರೀತಿ ಮಾಡಿದರೆ ಮಗುವಿನ ಮನಸ್ಸಿಗೆ ತುಂಬಾ ನೋವಾಗುತ್ತದೆ, ಮುಂದೆ
ಮಕ್ಕಳು ಏನನ್ನೂ ನಿಮಗೆ ಹೇಳಲು ಇಷ್ಟಪಡುವುದಿಲ್ಲ. ಆ ರೀತಿಯಾದರೆ ಮಕ್ಕಳು ಏನು ಮಾಡುತ್ತಿದ್ದರೆ ಎಂದು
ತಿಳಿಯುವುದಿಲ್ಲ, ಕೆಲವೊಮ್ಮೆ ಕೆಟ್ಟ ಹಾದಿಯನ್ನು ಕೂಡ ತುಳಿಯಬಹುದು. ಆದ್ದರಿಂದ ಮಕ್ಕಳು ಹೇಳುವುದನ್ನು
ಕೇಳಿ, ಆಗ ಮಕ್ಕಳಿಗೆ ನಿಮ್ಮಲ್ಲಿ ಆತ್ಮೀಯತೆ ಹೆಚ್ಚಾಗುವುದು.
2. ವಯಸ್ಸಿಗೆ ತಕ್ಕ ರೀತಿ ಇರು: ಮಕ್ಕಳು ಪೋಷಕರ ಹತ್ತಿರ
ಬಾಲಿಷವಾಗಿಯೇ ಆಡುತ್ತಾರೆ. 10 ವರ್ಷದ ಮಗಳು 5 ವರ್ಷದ ಹುಡುಗಿ ತರ ಆಡುತ್ತಿದ್ದರೆ ನಿನ್ನ ವಯಸ್ಸುಗೆ
ತಕ್ಕ ಹಾಗೆ ಇರಲು ಕಲಿ ಅತ ಬೈಯುವುದು ಸರಿಯಲ್ಲ. ಮಕ್ಕಳು ಏನಾದರೂ ಮಾಡಿ, ಅದು ನಿಮಗೆ ತುಂಬಾ ಕಿರಿಕಿರಿಯನ್ನು
ಉಂಟು ಮಾಡಿದ್ದರೂ ಆ ಕ್ಷಣ ಪ್ರತಿಕ್ರಿಯೆಸಲು ಹೋಗಬೇಡಿ. ನಂತರ ನಿಧಾನಕ್ಕೆ ಹೇಳಿ ನೀನು ಮಾಡುವುದು
ಸರಿಯಿಲ್ಲ ಅಂತ ಅವು ತಿದ್ದಿ ಕೊಳ್ಳುತ್ತವೆ.
3. ನಿನಗೇನು ಅರ್ಥವಾಗಲ್ವಾ?: ಮಕ್ಕಳಿಗೆ ಏನಾದರೂ
ಪಾಠ ಹೇಳಿ ಕೊಡುವಾಗ ತುಂಬಾ ಸಲ ಹೇಳಿ ಕೊಟ್ಟರೂ ಪುನಃ ತಪ್ಪು ಮಾಡುವಾಗ ನಿನಗೇನು ಅರ್ಥವಾಗಲ್ವಾ? ಅಂತ
ಕೇಳ ಬೇಡಿ. ಮಕ್ಕಳಿಗೂ ತಂದೆ, ತಾಯಿ ಹತ್ತಿರ ಭೇಷ್ ಅನ್ನಿಸಿಕೊಳ್ಳಬೇಕೆಂಬ ಆಸೆ ಇರುತ್ತದೆ. ಮಕ್ಕಳಿಗೆ
ಮತ್ತೊಮ್ಮೆ ಟ್ರೈ ಮಾಡು ಅಂತ ಹೇಳಬೇಕೆ ಹೊರತು ಇನ್ನೂ ಅರ್ಥವಾಗಿಲ್ವಾ? ಅಂತ ಕೇಳಬೇಡಿ.
4. ನಿನ್ನ ಬಿಟ್ಟು ಹೋಗುತ್ತೇನೆ: ಮಕ್ಕಳಿಗೆ ಈ ಮಾತು
ಯಾವತ್ತಿಗೂ ಹೇಳಬೇಡಿ. ನಿಮ್ಮ ಬಿಟ್ಟು ಹೋಗಿ ಬಿಡುತ್ತೇನೆ, ನೀನು ನನಗೆ ಬೇಡ ಎಂದು ಹೇಳಿದರೆ ಮಕ್ಕಳು
ಮಾನಸಿಕವಾಗಿ ಕುಗ್ಗಲಾರಂಭಿಸುತ್ತಾರೆ. ಮಕ್ಕಳು ಹೋಂ ವರ್ಕ್ ಮಾಡದಿದ್ದಾಗ
ಅಥವಾ ಮಾರ್ಕ್ಸ್ ತುಂಬಾ ತೆಗೆಯದಿದ್ದಾಗ ಕೆಲ ಪೋಷಕರು ಈ ರೀತಿ ಮಕ್ಕಳನ್ನು ಭಯಪಡಿಸುತ್ತಾರೆ. ಆದರೆ
ಆ ರೀತಿ ಮಾಡುವುದು ತುಂಬ ತಪ್ಪು. ಮಕ್ಕಳೊಂದಿಗೆ ಆತ್ನೀಯವಾಗಿ ವರ್ತಿಸಿ ಆಗ ಅವರು ನೀವು ಹೇಳಿದಂತೆ
ಕೇಳುವುದು.
No comments:
Post a Comment